ಎಂಡೊಸ್ಕೋಪ್

	ಸ್ವರಯಂತ್ರಮುಖ ಮತ್ತು ಸ್ವರತಂತುಗಳ ವಿವಿಧ ಸ್ಥಿತಿಯನ್ನಲ್ಲದೆ ಧ್ವನಿಗಳ ಮೂಲಸ್ಥಾನವನ್ನೂ ಅರಿಯಲು ಬಳಸುವ ಎಂಡೊಸ್ಕೋಪ್ ಯಂತ್ರವೇ. ಹಿಗಿನಕ್ ಮತ್ತು ಮೈಕೊನಸೆಲಿ ವಿದ್ವಾಂಸರು ಇದನ್ನು ಕಂಡು ಹಿಡಿದವರು. ಬಾಯಿ ಮುಚ್ಚಿಕೊಂಡು ಉಚ್ಛಾರ ಮಾಡುತ್ತಿರುವಾಗಲೂ ಇದರಿಂದ ಸ್ವರಯಂತ್ರ, ಸ್ವರತಂತುಗಳ ವಿವಿಧ ಕಾರ್ಯ ಮತ್ತು ಅವುಗಳ ಸ್ಥಿತಿಯನ್ನು ಗಮನಿಸಬಹುದು. ಹೀಗೆ ವಿವಿಧ ಧ್ವನಿಗಳ ಉಚ್ಛಾರಸ್ಥಾನ ಪರೀಕ್ಷಣೆಯ ಅಧ್ಯಯನ ಕಾರ್ಯವನ್ನು ಸುಲಭವಾಗಿ ನಡೆಸಬಹುದು. ಇದನ್ನು ಕಂಡುಹಿಡಿಯುವ ಮೊದಲು ಲೆರಿಂಗೊಸ್ಕೋಪನ್ನು ಧ್ವನಿ ಅಧ್ಯಯನಕ್ಕಾಗಿ ಬಳಸಲಾಗುತ್ತಿತ್ತು. ಬೊಜಿûನಿ, ಬೊಬಿಂಗ್‍ಟನ್, ಗರ್ಶಿಯ, ಟರ್ಕ್ ಮತ್ತು ಜೆರಮಕ್ ಧ್ವನಿ ಉಚ್ಛಾರ ಮಾಡುವ ವ್ಯಕ್ತಿಯ ಕಿರುನಾಲಿಗೆ ಮತ್ತು ಗಂಟಲಿನ ವರೆಗೆ ನೂಕಿ ಆ ದರ್ಪಣದ ಮೇಲೆ ಸ್ವರಯಂತ್ರ ಮತ್ತು ಸ್ವರತಂತುಗಳ ಪ್ರತಿಬಿಂಬ ಬೀಳುವಂತೆ ಮಾಡಿ, ಪ್ರತಿಬಿಂಬಗಳ ಆಧಾರದಿ ಸ್ವರಯಂತ್ರ, ಸ್ವರತಂತುಗಳ ಸ್ಥಿತಿ ಮತ್ತು ಆ ಧ್ವನಿಗಳ ಮೂಲಸ್ಥಾನವನ್ನು ಕಂಡುಹಿಡಿಯುತ್ತಿದ್ದರು. ಆದರೆ ಇದು ಧ್ವನಿಗಳ ಸ್ಥೂಲವಾದ ಅಧ್ಯಯನಕ್ಕೆ ಸಹಾಯಕವಾಗುತ್ತಿತ್ತೇ ವಿನಾ ಮತ್ತೇನಲ್ಲ. ಏಕೆಂದರೆ, ಬಾಯಲ್ಲೇ ಯಂತ್ರವನ್ನು ಇರಿಸಿಕೊಂಡು ಧ್ವನಿಗಳನ್ನು ಉಚ್ಛಾರ ಮಾಡುವುದರಿಂದ ಧ್ವನಿಯ ಸ್ವಾಭಾವಿಕತೆ ಇಲ್ಲವಾಗುತ್ತಿತ್ತು. ಇಂಥ ಅಸ್ವಾಭಾವಿಕ ಧ್ವನಿಗಳ ಅಧ್ಯಯನ, ವಿಶ್ಲೇಷಣೆ ಮತ್ತು ವರ್ಗೀಕರಣ ಅಷ್ಟೊಂದು ಸಮಂಜಸವೆನಿಸುವುದಿಲ್ಲ. ಅಲ್ಲದೆ, ಸ್ವರಯಂತ್ರ ಮತ್ತು ಸ್ವರತಂತುಗಳ ರೀತಿ ಪ್ರತಿಬಿಂಬದ ರೂಪದಲ್ಲಿ ಅಸ್ಪಷ್ಟವಾಗಿರುತ್ತಿದ್ದುದರಿಂದ, ಈ ವಿಧಾನದ ಅಧ್ಯಯನ ಮತ್ತಷ್ಟು ಅನುಮಾನಕ್ಕೆಡೆ ಮಾಡುತ್ತಿತ್ತು. ಧ್ವನಿಗಳನ್ನು ಸ್ವಾಭಾವಿಕವಾಗಿ ಬಾಯಿ ಮುಚ್ಚಿಯೋ ತೆರೆದೋ ಉಚ್ಛಾರ ಮಾಡುವಾಗ ಸ್ವರಯಂತ್ರ, ಸ್ವರಯಂತ್ರಮುಖ, ಸ್ವರತಂತು ಮತ್ತು ಧ್ವನಿಗಳ ಮೂಲ ಮುಂತಾದ ಪ್ರಮುಖ ಕ್ರಿಯೆಗಳನ್ನು ವೈe್ಞÁನಿಕ ಹಾಗೂ ಸೂಕ್ಷ್ಮವಾಗಿ ಅಧ್ಯಯನ ನಡೆಸಿ ಧ್ವನಿವಿe್ಞÁನದಲ್ಲಿ ಅವುಗಳ ವಿಶ್ಲೇಷಣೆ ಮತ್ತು ವರ್ಗೀಕರಣ ಮಾಡಲು ಪ್ರಸ್ತುತ ಎಂಡೊಸ್ಕೋಪ್ ಯಂತ್ರದ ಬಳಕೆ ಹೆಚ್ಚುತ್ತಿದೆ.					 
    (ಕೆ.ಕೆ.ಜಿ.) 
									(ಪರಿಷ್ಕರಣೆ: ಸಿ.ಎಸ್.ರಾಮಚಂದ್ರ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ